ಜನ್ಮ ನೀಡಿದ ಭೂತಾಯಿಯ
ಪಡುವಾರಳ್ಳಿ ಪಾಂಡವರು ದೊಡ್ಡರಂಗೇಗೌಡ
ವಿಜಯ ಭಾಸ್ಕರ್
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ || ಪ ||
ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯ ತೊಟ್ಟಿಲು
ಈ ಮಾಚ ಈ ಕೆಂಚ ಎಲ್ಲಾ ಹೆಸರು
ಈ ನನ್ನೆದೆಯ ಹಚ್ಚೆಲೆಯ ಹಸಿರು || ೧ ||
ಈ ಗೌರಿ ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ ಊರೆಲ್ಲ ಕುಣಿದೆ
ಕಾಳವ್ವ ರುಕ್ಮವ್ವ ನನ್ನ ಎತ್ತಾಡಿ
ಹರಸಿದ ತಾಯಿಯರ ಹೇಗೆ ಮರೆಯಲಿ || ೨ ||
ಈ ಜೀವ ಈ ದೇಹ ಅರೆದು ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಭುವಿಯತ್ತ ಪೆಚ್ಚಾಗಿ ಓಡುವ
ಪಂಜರದ ಹಕ್ಕಿಗಳ ಹೇಗೆ ಮರೆಯಲಿ || ೩ ||
ಪಡುವಾರಳ್ಳಿ ಪಾಂಡವರು
ಚಿತ್ರ ನೋಡಿ